ಪ್ಯಾರಿಸ್ : 33ನೇ ಆವೃತ್ತಿಯ ವಿಶ್ವದ ಅತಿದೊಡ್ಡ ಬಹು ಕ್ರೀಡಾ ಸ್ಪರ್ಧೆ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನ ಆಕರ್ಷಕ ಸಮಾರೋಪ ಸಮಾರಂಭವು ಒಲಿಂಪಿಕ್ಸ್‌ನ ಪ್ರಮುಖ ಕ್ರೀಡಾಂಗಣ, ಸಾಂಪ್ರದಾಯಿಕ ತಾಣ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಅತ್ಯಂತ ಸಾಂಪ್ರದಾಯಿಕ ಅಂಶಗಳಾದ ಕ್ರೀಡಾಪಟುಗಳ ಪರೇಡ್, 45,0000 ಸ್ವಯಂ ಸೇವಕರಿಗೆ ಧನ್ಯವಾದಗಳು, ಮಹಿಳೆಯರ ಮ್ಯಾರಥಾನ್ ವಿಜೇತರಿಗೆ ಪದಕ ಪ್ರದಾನ, ಒಲಿಂಪಿಕ್ಸ್ ಜ್ವಾಲೆಯನ್ನು ನಂದಿಸುವುದು ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಹಾಗೂ ಹಾಕಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಭಾರತದ ಧ್ವಜಧಾರಿಗಳಾಗಿದ್ದಾರೆ.