ಫ್ಲೋರಿಡಾ: ಅಂತರರಾಷ್ಟ್ರೀಯ ಬಾಹ್ಯಾಕಾಶ (ISS) ನಿಲ್ದಾಣದಲ್ಲಿರುವ ಅಂತರರಾಷ್ಟ್ರೀಯ ಆಕ್ಸಿಯಮ್ ಮಿಷನ್ 4 ಸಿಬ್ಬಂದಿಯ ಭಾಗವಾಗಿರುವ ಪೈಲಟ್ ಶುಭಾಂಶು ಶುಕ್ಲಾ (Shubhanshu Shukla) ಬುಧವಾರ ಕಕ್ಷೆಯಲ್ಲಿ ಒಂದು ವಾರವನ್ನು ಪೂರ್ಣಗೊಳಿಸಿದರು.
ಕರ್ತವ್ಯವಿಲ್ಲದ ರಜಾ ದಿನವನ್ನು ಭೂಮಿಯಲ್ಲಿರುವ ತಮ್ಮ ಕುಟುಂಬದೊಂದಿಗೆ ಮಾತನಾಡುತ್ತಾ ಕಳೆದರು. ತಮ್ಮ ಕಾರ್ಯನಿರತ ಸಂಶೋಧನಾ ವೇಳಾಪಟ್ಟಿಯನ್ನು ಪುನರಾರಂಭಿಸಲು ತಯಾರಿ ನಡೆಸಿದರು ಎಂದು ಆಕ್ಸಿಯಮ್ ಸ್ಪೇಸ್ ತನ್ನ ಅಧಿಕೃತ ಬ್ಲಾಗ್ನಲ್ಲಿ ತಿಳಿಸಿದೆ.