ಭಟ್ಕಳ: ಕೇಂದ್ರ ಸರ್ಕಾರ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯುವಂತೆ ಸೂಚನೆ ನೀಡಿದೆ. ಕರ್ನಾಟಕದವರನ್ನು ವಿವಾಹವಾಗಿ ಇಲ್ಲೇ ನೆಲೆಸಿರುವ 50 ಮಂದಿ ಪಾಕ್ ಪ್ರಜೆಗಳು ವೀಸಾ (Visa) ರದ್ಧಾಗುವ ಆತಂಕದಲ್ಲಿದ್ದಾರೆ. ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಭಾರತೀಯ ಪೌರತ್ವ ಅವರಿಗೆ ಸಿಕ್ಕಿಲ್ಲ.
ಏಪ್ರಿಲ್ 23 ರಂದು ಜಮ್ಮು-ಕಾಶ್ಮೀರದ ಪೆಹಲ್ಗಾಮ್‌ನಲ್ಲಿ (Pehalgam) ಪ್ರವಾಸಿಗರ ಮೇಲೆ ನಡೆದ ಉಗ್ರರು ನಡೆಸಿದ (Terror Attack) ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿ ಬರೋಬ್ಬರಿ 27 ಮಂದಿ ಮೃತಪಟ್ಟಿದ್ದಾರೆ.