ಮನಾಮ : ನ್ಯೂ ಮಿಲೇನಿಯಮ್ ಸ್ಕೂಲ್, ಬಹ್ರೇನ್, ತನ್ನ ವಾರ್ಷಿಕ ದಿನವನ್ನು ಬಹಳ ಸಂಭ್ರಮದಿಂದ 23ನೇ ನವೆಂಬರ್, 2024 ರಂದು ಆಚರಿಸಿತು. ಕಾರ್ಯಕ್ರಮವನ್ನು “ಡಿಸ್ನಿ ವಂಡರ್ಸ್ @ NMS”, ಥೀಮ್ ನಾಮದೊಂದಿಗೆ ವೈಭವದಿಂದ ಆಯೋಜಿಸಲಾಗಿದ್ದು ಒಂದು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ.
ಬಹ್ರೇನ್ ನ ಭಾರತೀಯ ರಾಯಭಾರಿ ಶ್ರೀಯುತ ಶ್ರೀ ವಿನೋದ್ ಕೆ ಜಾಕೋಬ್ ರವರು ಮುಖ್ಯ ಅತಿಥಿಯಾಗಿ ಉಪ ಸ್ಥಿತರಿದ್ದರು, ಮತ್ತು ಶಿಕ್ಷಣ ಸಚಿವಾಲಯದ ಗಣ್ಯ ವ್ಯಕ್ತಿಗಳು ,ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಮಾಧ್ಯಮದ ಪ್ರವೀಣ ಸದಸ್ಯರು.ಕಾರ್ಯಕ್ರಮದಲ್ಲಿ ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮವು ಬಹ್ರೇನ್ ಮತ್ತು ಭಾರತದ ರಾಷ್ಟ್ರ ಗಾನ , ನಂತರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಗಿ, ಗೌರವಾನ್ವಿತ ಅತಿಥಿಗಗಳಾದ ಅಧ್ಯಕ್ಷ ಡಾ. ರವಿ ಪಿಳ್ಳೆ ಮತ್ತು ಇತರರು ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ನಾಯಕ ಹಾಗು ನಾಯಕಿ ಸ್ವಾಗತ ಭಾಷಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ಶರ್ಮಾ ಶಾಲೆಯು ಸಾಧಿಸಿದ ಶ್ಲಾಘನೀಯ ಮೈಲಿಗಲ್ಲುಗಳನ್ನು ಎತ್ತಿ ತೋರಿಸುವ ವಾರ್ಷಿಕ ವರದಿಯನ್ನು ನಿರೂಪಿಸಿದರು.
ಶಾಲೆಯ ಚೇರ್ಮನ್ ಡಾ.ರವಿ ಪಿಳ್ಳೈ, ಶಾಲಯ ಪ್ರಗತಿಪರ ಬೆಳೆಯವಣಿಗಯನ್ನು ಶ್ಲಾಘಿಸಿದರು. ಶೈಕ್ಷಣಿಕ ಹಾಗೂ ಸಹಪಠ್ಯ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಉತ್ತಮವಾಗಲಿ ಎಂದು ಹಾರೈಸಿದರು.
ಪ್ರಾಂಶುಪಾಲ ಡಾ.ಅರುಣ್ ಕುಮಾರ್ ಶರ್ಮಾ ಅವರು ಶಾಲೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಾಧನೆಗಳನ್ನು ಎತ್ತಿ ತೋರಿಸಿದರು . ಕಳೆದ ಶೈಕ್ಷಣಿಕ ವರ್ಷದ ಸದಸ್ಯರು ಮತ್ತು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು, ವಿವಿಧ ಶಾಲಾ ಚಟುವಟಿಕೆಗಳಲ್ಲಿ , ಸಹಯೋಗದಲ್ಲಿ ಭಾಗವಹಿಸಿದ ಸರ್ವರಿಗೂ ಮತ್ತು ಅವರ ಪೋಷಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಹಿಂದಿನ ಅಧಿವೇಶನದಲ್ಲಿ 100% ಹಾಜರಾತಿ ಗಳಿಸಿದವರಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು
ಬಹುಮಾನ ವಿತರಣಾ ಸಮಾರಂಭದಲ್ಲಿ, ಗೌರವಾನ್ವಿತ ಅತಿಥಿಗಳು ಇಪ್ಪತ್ತು, ಹದಿನೈದು ಮತ್ತು ಹತ್ತು ವರ್ಷ ಸೇವೆ ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಸ್ಮರಣಿಕೆಗಳನ್ನು ನೀಡಿದರು.
ವಿದ್ಯಾರ್ಥಿಗಳು ಸಂಗೀತ, ನೃತ್ಯ ಮತ್ತು ನಾಟಕದೊಂದಿಗೆ ದಯೆ ಮತ್ತು ಸಹಾನುಭೂತಿಯ 4 ಕ್ಲಾಸಿಕ್ ಡಿಸ್ನಿ ಕಥೆಗಳ ವೈಭವೋಪ್ರೇರಿತ ಪ್ರದರ್ಶನ ನೀಡಿದರು.
ಸುಸ್ವರದ ಸ್ವಾಗತ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸುಮಧುರವಾದ ವಾದ್ಯ ಪ್ರಸ್ತುತಿ ಮತ್ತು ಭವ್ಯವಾದ ನಂತರ ಸ್ನೋ ವೈಟ್ ಮತ್ತು ಸೆವೆನ್ ಡ್ವಾರ್ಫ್ಸ್ , ಫ್ರೋಜನ್ ಬ್ಯೂಟಿ ಅಂಡ್ ಬೀಸ್ಟ್ಸ್ ಮತ್ತು ಅಲ್ಲಾದೀನ್ ನಾಟಕಗಳ ಪ್ರಧರ್ಶನ ನಡೆಸಿದರು.