ಮಲಪ್ಪುರಂ : ಮಂಕಿಪಾಕ್ಸ್ (ಎಂಪಾಕ್ಸ್) ಸೋಂಕು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ವಿದೇಶದಿಂದ ವಾಪಸಾಗಿದ್ದ ವ್ಯಕ್ತಿಯೊಬ್ಬರು, ಎಂಪಾಕ್ಸ್ ರೋಗಲಕ್ಷಣಗಳನ್ನು ಪ್ರದರ್ಶಿಸಿದ್ದರಿಂದ ಅವರನ್ನು ಮಂಜೇರಿ ಮೆಡಿಕಲ್ ಕಾಲೇಜ್‌ಗೆ ದಾಖಲಿಸಲಾಗಿದೆ . ಇದೊಂದು ಮಂಕಿಪಾಕ್ಸ್ ಪ್ರಕರಣವಾಗಿರುವ ಸಾಧ್ಯತೆಯಿದ್ದುದರಿಂದ ರೋಗಿಯ ಮಾದರಿಗಳನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಗೆ ಕಳುಹಿಸಲಾಗಿದೆ.