ಪ್ಯಾರಿಸ್ : ಭಾರತೀಯ ಕುಸ್ತಿಪತು ವಿನೇಶ್ ಫೋಗಟ್ ರ ತೂಕವು ಮಿತಿಗಿಂತ 100 ಗ್ರಾಮ್ ಹೆಚ್ಚಾದ ಕಾರಣಕ್ಕಾಗಿ ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಫೋಗಟ್ ರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ನೀಡಿದ್ದಾರೆ.
ಮನವಿಯ ಕುರಿತ ನಿರ್ಧಾರವನ್ನು ಪ್ರಸಕ್ತ ಒಲಿಂಪಿಕ್ಸ್ ಮುಕ್ತಾಯಗೊಳ್ಳುವ ಮುನ್ನ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಪಂಚಾಯಿತಿ ನ್ಯಾಯಾಲಯ ನಿರ್ಧರಿಸಿದೆ.