ಮನಾಮ: ಭಾರತೀಯ ಸಮುದಾಯ ಪರಿಹಾರ ನಿಧಿ (ICRF) ಥರ್ಸ್ಟ್-ಕ್ವೆಂಚರ್ಸ್ 2024 ತಂಡವು ಜುಲೈ 6, 2024 ರ ಶನಿವಾರದಂದು ವಾರ್ಷಿಕ ಬೇಸಿಗೆ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮವು ಜುಲೈ ಮತ್ತು ಆಗಸ್ಟ್. ತಿಂಗಳಿನಲ್ಲಿ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಸಚಿವಾಲಯದ ಉಪಕ್ರಮದೊಂದಿಗೆ ಸಂಯೋಜಿಸಲ್ಪಟ್ಟಿದೆ.
ಕಾರ್ಮಿಕ ಸಚಿವಾಲಯದ ಹಿರಿಯ ಆಕ್ಯುಪೇಷನಲ್ ಸೇಫ್ಟಿ ಇಂಜಿನಿಯರ್ ಶ್ರೀ ಹುಸೇನ್ ಅಲ್ ಹುಸೇನಿ, ICRF ಅಧ್ಯಕ್ಷ ಡಾ. ಬಾಬು ರಾಮಚಂದ್ರನ್ ಮತ್ತು ICRF ತಂಡದೊಂದಿಗೆ ಮರಾಸ್ಸಿಯಲ್ಲಿನ ಕಾರ್ಯಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಕಾರ್ಮಿಕರನ್ನು ಉದ್ದೇಶಿಸಿ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ವಿಧಾನಗಳ ಬಗ್ಗೆ ಉಪದೇಶಿಸಿದರು.
ICRF ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ನೀರು, ಲೆಬನ್, ಹಣ್ಣುಗಳು ಮತ್ತು ಬಿಸ್ಕತ್ತುಗಳನ್ನು ವಿತರಿಸಿತು, 2016 ರಲ್ಲಿ ಪ್ರಾರಂಭವಾದ ICRF ಥರ್ಸ್ಟ್-ಕ್ವೆಂಚರ್ಸ್ ಸಮ್ಮರ್ ಅವೇರ್ನೆಸ್ ಕ್ಯಾಂಪೇನ್‌ನ ಸತತ 9 ವರ್ಷದಿಂದ ನಡೆಸಿಕೊಂಡು ಬಂದಿದೆ.
ಸುಮಾರು 360 ಕಾರ್ಮಿಕರು ಭಾಗವಹಿಸಿದ್ದರು, ಬೋಹ್ರಾ ಸಮುದಾಯ ಮತ್ತು ಉದಾರ ಸ್ವಯಂಸೇವಕರು ಈ ಯೋಜನೆಗೆ ಬಲವಾದ ಬೆಂಬಲವನ್ನು ನೀಡೀದ್ದಾರೆ . ICRF ಥರ್ಸ್ಟ್-ಕ್ವೆಂಚರ್ಸ್ ತಂಡವು ಈ ಸಾಪ್ತಾಹಿಕ ಕಾರ್ಯಕ್ರಮಗಳನ್ನು ಮುಂದಿನ 10 ರಿಂದ 12 ವಾರಗಳವರೆಗೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಮುಂದುವರಿಸಲು ತೀರ್ಮಾನಿಸಿದೆ.