ನವದೆಹಲಿ : ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತದ ಸೇನಾ ಪಡೆಯ (Chief of Army Staff) 30ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅತ್ಯಾಧುನಿಕ ಸಮರ ಕಲೆಗಳನ್ನು ಅಳವಡಿಸಬೇಕೆನ್ನುವ ಮನೋಭಾವದ ಜನರಲ್ ಉಪೇಂದ್ರ ದ್ವಿವೇದಿ ಸರಿಯಾದ ಸಂದರ್ಭದಲ್ಲಿ ಸೇನಾ ಪಡೆ ಚುಕ್ಕಾಣಿ ಹಿಡಿಯುತ್ತಿದ್ದಾರೆ.
ಜನರಲ್ ಮನೋಜ್ ಸಿ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಜೂನ್ 11ರಂದು ಉಪೇಂದ್ರ ದ್ವಿವೇದಿ ಅವರು ಸೇನಾ ಪಡೆಯ ಪರಮೋಚ್ಚ ಪದವಿಗೆ ಆಯ್ಕೆಯಾಗಿದ್ದರು. ಇದಕ್ಕೆ ಮುನ್ನ ನಾಲ್ಕು ತಿಂಗಳ ಕಾಲ ಸೇನಾ ಪಡೆಯ ವೈಸ್ ಚೀಫ್ ಆಗಿ ಕೆಲಸ ಮಾಡಿದ್ದರು.
ಅವರು ಸೇನಾ ಪಡೆಯ ವಿವಿಧ ಸ್ತರ ಮತ್ತು ಹುದ್ದೆಗಳಲ್ಲಿ ಕೆಲ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಸೇನಾ ಪಡೆಗೆ ನಿಯೋಜಿಸಬೇಕು.