ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ವೀಕ್ಷಿಸಲು ಮಂಗಳೂರಿನಲ್ಲಿ ಭಾರೀ ಜನಸ್ತೋಮ ನೆಲೆಸಿದ್ದು ಎಲ್ಲೆಲ್ಲೂ ಜೈಕಾರದ ಜೊತೆ ಹೂಮಳೆಗೈದರು. ಜೊತೆಗೆ ಮೋದಿ ಮೋದಿ ಜೈಕಾರದೊಂದಿಗೆ ಭರ್ಜರಿ ಸ್ವಾಗತ ನಡೆಯಿತು.
ಲೇಡಿಹಿಲ್ನಲ್ಲಿರುವ ನಾರಾಯಣ ಗುರು ವೃತ್ತದಲ್ಲಿ ಆರಂಭವಾದ ಕಾರ್ಯಕ್ರಮವು ನವಭಾರತ ವೃತ್ತದಲ್ಲಿ ಮುಕ್ತಾಯವಾಯಿತು.
ನಾರಾಯಣ ಗುರು ವೃತ್ತದಲ್ಲಿ ಪ್ರಧಾನಿ ಮೋದಿ ಅವರನ್ನು ಆರತಿ ವಿಧಿವಿಧಾನದ ಮೂಲಕ ಸ್ವಾಗತಿಸಲಾಯಿತು, ನಂತರ ರೋಡ್ ಶೋ ಆರಂಭಿಸುವ ಮೊದಲು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.