ಯಾದಗಿರಿ : ತಾಲೂಕಿನ ಮಲ್ಹಾರ್ ತಾಂಡದಲ್ಲಿ ಮಾರ್ಚ್ 10 ರ ರಾತ್ರಿ 11 ಗಂಟೆ ಸುಮಾರಿಗೆ ಸೋನಿಬಾಯಿ (48) ಎಂಬಾಕೆಯ ಬರ್ಬರ ಕೊಲೆಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಸೋನಿಬಾಯಿ ಮಗ ಅರ್ಜುನ್(17) ಒದ್ದಾಡುತ್ತಿದ್ದ. ಇದನ್ನು ನೋಡಿದ ಇಡೀ ತಾಂಡದ ನಿವಾಸಿಗಳು ಅಕ್ಷರಶ ಬೆಚ್ಚಿ ಬಿದ್ದಿದ್ದಾರೆ.
ಸೋನಿಬಾಯಿ ಪತಿ ಮಲ್ಯಾ ರಾಠೋಡ್ ಕೂಡ ಮನೆ ಮುಂದೆ ಇರುವ ಬೇವಿನ ಮರಕ್ಕೆ ಕೊರಳೊಡ್ಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ. ಇದನ್ನು ನೋಡಿದ ವ್ಯಕ್ತಯೋರ್ವ ಕೂಡಲೇ ಮಲ್ಯಾನನ್ನ ನೇಣು ಕುಣಿಕೆಯಿಂದ ಕೆಳಗೆ ಇಳಿಸುತ್ತಾನೆ. ತಕ್ಷಣ ಗ್ರಾಮಸ್ಥರು ವಿಷಯ ತಿಳಿದು ಮಲ್ಯಾನನ್ನ ಆಸ್ಪತ್ರೆಗೆ ದಾಖಲಿಸುತ್ತಾರೆ.
ಸೋನಿಬಾಯಿ ಪುತ್ರ ಅರ್ಜುನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನ್ನ ಕಂಡ ಗ್ರಾಮಸ್ಥರು ಕೂಡಲೇ ಅರ್ಜುನ್ ಬಳಿ ಘಟನೆ ಬಗ್ಗೆ ಕೇಳುತ್ತಾರೆ. ಆಗ ಅರ್ಜುನ್ ‘ತಂದೆ ಮಲ್ಯಾನೇ, ತಾಯಿಗೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳುತ್ತಾನೆ.
ತಾಯಿಯನ್ನ ರಕ್ಷಣೆ ಮಾಡಲು ಹೋಗಿದ್ದ ನನಗೂ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಆದ್ರೆ, ತಾಯಿ ಸೋನಿಬಾಯಿಗೆ ಎದೆ ಮತ್ತು ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದ ಕಾರಣಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ನಾನು ಮಾತ್ರ ಪ್ರಾಣ ಉಳಿಸಿಕೊಳ್ಳಲು ಹೊರಗಡೆ ಓಡಿ ಬಂದಿದ್ದೆನೆ ಎಂದು ಹೇಳುತ್ತಾನೆ. ತಕ್ಷಣ ಅರ್ಜುನನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.