ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲು ದೇಶದಾದ್ಯಂತ ಕೋಟ್ಯಂತರ ಜನರು ದೇಣಿಗೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಪ್ರಸಿದ್ಧ ವ್ಯಕ್ತಿಗಳು ಮತ್ತು ಉದ್ಯಮಿಗಳು ಸೇರಿದ್ದಾರೆ.
ಈ ಭವ್ಯವಾದ ಮಂದಿರ ನಿರ್ಮಾಣಕ್ಕೆ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿ ಗುಜರಾತಿನ ಆಧ್ಯಾತ್ಮಿಕ ಗುರು ಹಾಗೂ ರಾಮ ಕಥಾ ವಾಚಕ ಮೊರಾರಿ ಬಾಪು.
ಮೊರಾರಿ ಬಾಪು ಅವರು ರಾಮಾಯಣ ಪ್ರಚಾರದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದಾರೆ. ಈ ಉದ್ದೇಶದಡಿಯಲ್ಲಿ ಬಾಪು ಅವರು ಮಂದಿರ ನಿರ್ಮಾಣ ಕಾರ್ಯಕ್ಕೆ ಬಾಪು ಅವರ ಹೆಸರಲ್ಲಿ 18.3 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.
ಮೊರಾರಿ ಅವರು ಇಷ್ಟು ದೊಡ್ಡ ಮೊತ್ತವನ್ನು ವಿವಿಧ ದೇಶಗಳಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಈಗಾಗಲೇ 11.30 ಕೋಟಿ ರೂ ದೇಣಿಗೆ ಹಸ್ತಾಂತರಿಸಿದ್ದಾರೆ. ಮತ್ತೆ ಬ್ರಿಟನ್ ಮತ್ತು ಯುರೋಪ್‌ನಲ್ಲಿ ರಾಮಕಥಾ ಪ್ರದರ್ಶನದ ಮೂಲಕ ಅವರ ಬೆಂಬಲಿಗರಿಂದ 3.21 ಕೋಟಿ ರೂ, ಮತ್ತು ಅಮೇರಿಕಾ, ಕೆನಡಾ ಮತ್ತು ಇತರ ದೇಶಗಳಿಂದ 4.10 ಕೋಟಿ ರೂ.ಗಳ ಮಹತ್ವದ ದೇಣಿಗೆಯನ್ನು ಸಂಗ್ರಹಿಸಿ ದೇವಾಲಯ ಮಂದಿರ ನಿರ್ಮಾಣ ಟ್ರಸ್ಟ್ಗೆ ನೀಡಲಿದ್ದಾರೆ
ಬಾಪು ಅವರು ಗರಿಷ್ಠ ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ದೇವಸ್ಥಾನ ನಿರ್ಮಾಣ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ.
ರಾಮ್ ಮೊರಾರಿ ಕಳೆದ 60 ವರ್ಷಗಳಿಂದ ರಾಮನ ಕಥೆಯನ್ನು ಹೇಳುವುದಕ್ಕೆ ತಮ್ಮನ್ನು ತಾವೂ ಮುಡಿಪಾಗಿಸಿಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಕಾರಣ ನನ್ನ ಹೃದಯ ಸಂತೋಷದಿಂದ ತುಂಬಿದೆ ಎಂದು ಬಾಪು ಹೇಳಿದ್ದಾರೆ. ಮೊರಾರಿ ಬಾಪು ಅವರು ಅಯೋಧ್ಯೆ ವಿವಾದದ ಶಾಂತಿಯುತ ಪರಿಹಾರಕ್ಕಾಗಿ ನಿರಂತರ ಕರೆ ನೀಡುವ ಮೂಲಕ ಪ್ರಸಿದ್ಧರಾಗಿದ್ದರು.