ಹರಿಯಾಣ: ಇಡೀ ದೇಶವು ರಾಮ್ ಲಲ್ಲಾನ ( Ram Lalla) ಪ್ರಾಣ ಪ್ರತಿಷ್ಠಾ (Pran Pratishtha) ಸಮಾರಂಭವನ್ನು ಆಚರಿಸಿದೆ. ಈ ವಿಶೇಷ ಸಂದರ್ಭದಲ್ಲಿ ದೇಶದ ಹಲವೆಡೆ ಹಲವು ಹಬ್ಬದಾಚರಣೆ ಮಾಡಲಾಗಿದೆ.
ಹರಿಯಾಣದ ಭಿವಾನಿಯಲ್ಲಿ ರಾಮಲೀಲಾ (Ram Leela) ಕಾರ್ಯಕ್ರಮದ ವೇಳೆ ಹನುಮಾನ್ (Hanuman) ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಹೃದಾಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಹರೀಶ್ ಮೆಹ್ತಾ ಎಂಬುವವರು ನೃತ್ಯ ಮಾಡುತ್ತಲೇ ಕುಸಿದುಬಿದ್ದಿದ್ದಾರೆ. ರಾಮನಿಗೆ ಕೈ ಮುಗಿಯುತ್ತಿದ್ದಂತೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.