ಮುಂಬೈ: ಟೀಂ ಇಂಡಿಯಾ ಹೊಸ ಉತ್ಸಾಹದೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿದೆ. ಜೂನ್ 2024 ರಲ್ಲಿ USA ಮತ್ತು ವೆಸ್ಟ್ ಇಂಡೀಸ್‌ನಲ್ಲಿ T20 ವಿಶ್ವಕಪ್ ನಡೆಯಲಿದೆ. ಈ ಬಾರಿ ಚುಟುಕು ಕ್ರಿಕೆಟ್ ಕಪ್ ತನ್ನದಾಗಿಸಿಕೊಳ್ಳಲು ಟೀಂ ಇಂಡಿಯಾ ತೀರ್ಮಾನಿಸಿದೆ.
ಜನವರಿ 03-07 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ (ಕೇಪ್ ಟೌನ್) ನಡೆಯಲಿದೆ. ನಂತರ ಅಫ್ಘಾನಿಸ್ತಾನದೊಂದಿಗೆ 3 ಟಿ20 ಸರಣಿ ನಡೆಯಲಿದೆ.
ಜನವರಿ 11: ಮೊದಲ ಟಿ20 ಮೊಹಾಲಿ
ಜನವರಿ 14: ಎರಡನೇ ಟಿ20 ಇಂದೋರ್
ಜನವರಿ 17: ಮೂರನೇ ಟಿ20 ಬೆಂಗಳೂರುಇದನ್ನೂ ಓದಿ: 2023 Test XI: ಕೊಹ್ಲಿ-ರೋಹಿತ್ ಅಲ್ಲ, ಈ ಇಬ್ಬರು ಭಾರತೀಯರಿಗೆ 2023ರ ವಿಶ್ವ ಟೆಸ್ಟ್ ತಂಡದಲ್ಲಿ ಅವಕಾಶ
ಭಾರತಕ್ಕೆ ಇಂಗ್ಲೆಂಡ್ ಪ್ರವಾಸ -5 ಟೆಸ್ಟ್
ಜನವರಿ: 25-29 ಮೊದಲ ಟೆಸ್ಟ್ – ಹೈದರಾಬಾದ್
ಫೆಬ್ರವರಿ: 02-06 ಎರಡನೇ ಟೆಸ್ಟ್ – ವಿಶಾಖಪಟ್ಟಣ
ಫೆಬ್ರವರಿ: 15-19 ಮೂರನೇ ಟೆಸ್ಟ್ – ರಾಜ್ಕೋಟ್
ಫೆಬ್ರವರಿ: 23-27 ನಾಲ್ಕನೇ ಟೆಸ್ಟ್ – ರಾಂಚಿ
ಮಾರ್ಚ್: 07-11 ಐದನೇ ಟೆಸ್ಟ್ – ಧರ್ಮಶಾಲಾ
- ಏಪ್ರಿಲ್-ಮೇ: ಇಂಡಿಯನ್ ಪ್ರೀಮಿಯರ್ ಲೀಗ್
- ಜೂನ್: T20 ವಿಶ್ವಕಪ್ (ವೆಸ್ಟ್ ಇಂಡೀಸ್, USA)
- ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ತಂಡದೊಂದಿಗೆ ಮೂರು ODI ಮತ್ತು 3 T20 ಪಂದ್ಯಗಳನ್ನು ಆಡಲಿದೆ.
- ಸೆಪ್ಟೆಂಬರ್‌ನಲ್ಲಿ, ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ತವರಿನನಲ್ಲಿ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ.
- ಅಕ್ಟೋಬರ್‌ನಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಭಾರತದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿವೆ.
- ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಆಸೀಸ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.