ಜಪಾನ್ : ಜಪಾನ್ ನಲ್ಲಿ ವರ್ಷದ ಮೊದಲ ದಿನವೇ ಭಾರೀ ಭೂಕಂಪ ಸಂಭವಿಸಿದೆ. ಭೂಕಂಪದ ವೇಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಭಯಾನಕವಾಗಿವೆ.
ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.5 ಎಂದು ಅಳೆಯಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 1 ಮೀಟರ್ ಎತ್ತರದ ಅಲೆ ಎದ್ದಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜನರು ಜಾಗೃತರಾಗಿರಲು ಕೋರಲಾಗಿದೆ.
ಇನ್ನು ಕಟ್ಟಡ ಅಲುಗಾಡುತ್ತಿರುವುದು ಭಾಸವಾಗುತ್ತಿದ್ದಂತೆಯೇ, ಭೂಕಂಪದ ಅಪಾಯವನ್ನು ಅರಿತ ಸಾರ್ವಜನಿಕರು ಮೇಜಿನ ಕೆಳಗೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನುನೀರಿನ ಅಲೆಗಳು ಬಹಳ ಎತ್ತರಕ್ಕೆ ಏರುತ್ತಿರುವುದನ್ನು ಕಾಣಬಹುದು.