ಬಾಲ್ಯ ವಿವಾಹದ (Child Marriage) ಬಗ್ಗೆ ಎಷ್ಟೇ ಜಾಗೃತಿ ಮುಡಿಸಿದ್ರೂ ಅನಿಷ್ಟ ಪದ್ಧತಿಗೆ ಬ್ರೇಕ್ ಬಿದ್ದಿಲ್ಲ. 63 ವರ್ಷದ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯನ್ನು ಮದುವೆಯಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಭಾವಿಯಾಗಿರುವ ಪಾದ್ರಿ ಬಾಲಕಿಯನ್ನು ಮದುವೆಯಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚನಂತೆ ಹರಡಿದೆ. ಈ ಹಿನ್ನೆಲೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.
ಅಮಾನವೀಯ ಬಾಲ್ಯ ವಿವಾಹ ದಕ್ಷಿಣ ಆಫ್ರೀಕಾದ ಘಾನಾದಲ್ಲಿ ನಡೆದಿದೆ. ವಿವಾಹದಲ್ಲಿ ಸಮುದಾಯದ ಅನೇಕ ಮುಖಂಡರು ಸಹ ಭಾಗಿಯಾಗಿದ್ದರು.ಈ ವಿವಾದಿತ ವಿವಾಹದ ಬಗ್ಗೆ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ
ಈ ಬಾಲ್ಯ ವಿವಾಹಕ್ಕೆ ಹಾಜರಾದ ಮಹಿಳೆಯರು ಪುಟ್ಟ ಬಾಲಕಿಗೆ ಸಲಹೆಗಳನ್ನು ನೀಡಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ. ಗಂಡನನ್ನು ಆಕರ್ಷಿಸಲು ಒಳ್ಳೆಯ ಬಟ್ಟೆಗಳನ್ನು ತೊಡುವಂತೆ, ಸುಗಂಧ ದ್ರವ್ಯ ಬಳಸುವಂತೆ ಬಾಲಕಿಗೆ ಮಹಿಳೆಯರು ಸಲಹೆ ನೀಡಿದ್ದಾರೆ. ಇದು ಇನ್ನೂ ಹೆಚ್ಚಿನ ಟೀಕೆಗೆ ಗುರಿಯಾಗಿದೆ.