ನವದೆಹಲಿ: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today’ Global Summit) ಜಾಗತಿಕ ಶೃಂಗಸಭೆಯ ಎರಡನೇ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಭಾಗವಹಿಸಿದರು.
ಇಡೀ ವಿಶ್ವಕ್ಕೆ ಭಾರತದ 10 ವರ್ಷದ ಪರಿಶ್ರಮ ಕಾಣುತ್ತಿದೆ. ಕಳೆದ 10 ವರ್ಷದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಬದಲಾಗಿದೆ. ದೇಶದ ಸಾಮಾನ್ಯ ವ್ಯಕ್ತಿಯನ್ನು ಬೇರೆ ದೇಶಗಳು ನೋಡುವ ದೃಷ್ಟಿ ಬದಲಾಗಿದೆ. ಕೆಂಪು ಕೋಟೆಯಲ್ಲಿ ನಿಂತು ಭಾರತದ ಬಗ್ಗೆ ಮಾತನಾಡುತ್ತಿದ್ದರು. ಭಾರತ ದೇಶದ ಪ್ರಜೆಗಳು ಸೋಮಾರಿಗಳೆಂದು ಭಾಷಣ ಮಾಡಿದ್ದರು. ಈಗ ಇಡೀ ವಿಶ್ವವೇ ಭಾರತದ ಜೊತೆ ಸ್ನೇಹ ಮಾಡಲು ಮತ್ತು ವ್ಯವಹರಿಸಲು ಇಚ್ಚಿಸುತ್ತಿದೆ ಎಂದು ಹೇಳಿದರು.
10 ವರ್ಷದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. 2024ರಲ್ಲಿ ದೇಶದ ಮ್ಯೂಚುಯಲ್ ಫಂಡ್ನಲ್ಲಿ ಹೆಚ್ಚು ಹಣ ಸಂದಾಯ ಮಾಡಿದೆ. ಭಾರತೀಯನ ಆಲೋಚನೆ ಎಲ್ಲವನ್ನು ಸಾಧಿಸುವ ಛಲ ಹೆಚ್ಚಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಇರುವ ಫೈಲ್ಗಳನ್ನು ಖುದ್ದು ನಾನೇ ನೋಡುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ 17 ಲಕ್ಷ ಕೋಟಿ ರೂಪಾಯಿ ಯೋಜನೆಗಳ ಕಡತಗಳನ್ನು ಪರಿಶೀಲಿಸಿದ್ದೇನೆ. ಆದ್ದರಿಂದ ಈ ಯೋಜನೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.