ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಬಿಹಾರದ ಮುಜಾಫರ್‌ಪುರ ಮತ್ತು ಯಶವಂತಪುರ ನಿಲ್ದಾಣಗಳ (Yeshwantpur Muzaffarpur Special Train) ನಡುವೆ ಎರಡು ಟ್ರಿಪ್ ಹೋಳಿ ವಿಶೇಷ ರೈಲುಗಳನ್ನು ಓಡಿಸಲು ಪೂರ್ವ ಮಧ್ಯ ರೈಲ್ವೆಯು ನಿರ್ಧರಿಸಿದೆ.
ಮಾರ್ಚ್ 29 & ಏಪ್ರಿಲ್ 5, 2024 (ಶುಕ್ರವಾರ) ರಂದು ರೈಲು ಸಂಖ್ಯೆ 05271 ಮುಜಾಫರ್‌ಪುರ ನಿಲ್ದಾಣದಿಂದ ಮಧ್ಯಾಹ್ನ 03:30 ಗಂಟೆಗೆ ಹೊರಟು ಭಾನುವಾರ ಸಂಜೆ 7 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಏಪ್ರಿಲ್ 1 ಮತ್ತು 8, 2024 (ಸೋಮವಾರ) ರಂದು, ರೈಲು ಸಂಖ್ಯೆ 05272 ಯಶವಂತಪುರದಿಂದ ಬೆಳಿಗ್ಗೆ 07:30 ಗಂಟೆಗೆ ಹೊರಟು ಬುಧವಾರದಂದು 12 ಗಂಟೆಗೆ ತನ್ನ ಗಮ್ಯಸ್ಥಾನವಾದ ಮುಜಾಫರ್‌ಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ, ಹಾಜಿಪುರ ಜಂಕ್ಷನ್, ಪಾಟಲಿಪುತ್ರ ಜಂಕ್ಷನ್, ಅರಾ ಜಂಕ್ಷನ್, ಬಕ್ಸಾರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಪ್ರಯಾಗರಾಜ್ ಚಿಯೋಕಿ ಜಂಕ್ಷನ್, ಮಾಣಿಕ್ಪುರ ಜಂಕ್ಷನ್, ಸತ್ನಾ, ಕಟ್ನಿ ಜಂಕ್ಷನ್, ಜಬಲ್ಪುರ್, ನರಸಿಂಗಪುರ, ಪಿಪಾರಿಯಾ, ಇಟಾರ್ಸಿ ಜಂಕ್ಷನ್, ನಾಗ್ಪುರ, ಬಲ್ಹಾರ್ಶಾ, ಸಿರ್ಪುರ್ ಕಾಗಜ್ ನಗರ, ರಾಮಗುಂಡಂ, ಕಾಜಿಪೇಟ್ ಜಂಕ್ಷನ್, ಜನಗಾಂವ್, ಕಾಚಿಗುಡ, ಶಾದನಗರ್, ಜಡಚರ್ಲಾ, ಮಹಬೂಬ್ ನಗರ, ಗದ್ವಾಲ್ ಜಂಕ್ಷನ್, ಕರ್ನೂಲ್ ಸಿಟಿ, ಡೋನ್ ಜಂಕ್ಷನ್, ಗುತ್ತಿ ಜಂಕ್ಷನ್, ಅನಂತಪುರ ಮತ್ತು ಧರ್ಮಾವರಂ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿವೆ.