ಮುಂಬೈ: ಮುಂಬೈನ ಘಾಟ್ಕೋಪರ್ (Ghatkopar) ಪ್ರದೇಶದಲ್ಲಿ ಸೋಮವಾರ ಬೃಹತ್ ಹೋರ್ಡಿಂಗ್ ಕುಸಿತವಾಗಿ (Hoarding Collapse) ಅದರಡಿ ಬಹಳಷ್ಟು ಜನರು ಸಿಲುಕಿದ್ದರು. ಈ ದುರಂತ ಘಟನೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವು ಹೋರ್ಡಿಂಗ್ ಕುಸಿದ ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (Rescue Operation) ಪ್ರಾರಂಭಿಸಿತು.
ಬಿಎಂಸಿ ಅಧಿಕಾರಿಗಳ ಪ್ರಕಾರ, 120 x 120 ಅಡಿ ಅಳತೆಯ ಹೋರ್ಡಿಂಗ್ ಪೆಟ್ರೋಲ್ ಪಂಪ್ ಮೇಲೆ ಅಪ್ಪಳಿಸಿತು. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ನ ಮೇಲೆ 100 ಅಡಿ ಎತ್ತರದ ಜಾಹೀರಾತು ಫಲಕ ಬಿದ್ದಿದ್ದರಿಂದ ಸಾವಿನ ಸಂಖ್ಯೆ 14ಕ್ಕೆ ಏರಿದೆ ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 70 ಮಂದಿ ಗಾಯಗೊಂಡಿದ್ದಾರೆ.