ಮಾಲ್ಡೀವ್ಸ್: ಪ್ರವಾಸೋದ್ಯಮ (Tourism) ವಿಚಾರದಲ್ಲಿ ಭಾರತ ಮತ್ತು ಮಾಲ್ಡೀವ್ಸ್ (India vs Maldives) ನಡುವಿನ ರಾಜತಾಂತ್ರಿಕ ವಿವಾದದ ತಾರಕ್ಕೇರಿರುವ ಸಂದರ್ಭದಲ್ಲೇ ಮಾಲ್ಡೀವ್ಸ್ ಮತ್ತೊಮ್ಮೆ ಮಹತ್ವ ನಿರ್ಧಾರ ತೆಗೆದುಕೊಂಡಿದೆ.
ತನ್ನ ದೇಶದಲ್ಲಿರುವ ಭಾರತದ ಸೇನೆಯನ್ನ (Indian Army) ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಆಗ್ರಹಿಸಿದೆ. ಭಾರತ ವಿರೋಧಿ ಧೋರಣೆಯನ್ನು ಎದುರಿಸುತ್ತಿರುವ ಅಧ್ಯಕ್ಷ ಮೊಹಮ್ಮದ್ ಮುಯಿಜು ಚೀನಾ ಪ್ರವಾಸ ಮುಗಿಸಿ ಬರುತ್ತಿದ್ದಂತೆ ದ್ವೀಪದಲ್ಲಿರುವ ಭಾರತೀಯ ಸೈನಿಕರನ್ನು ದೇಶ ತೊರೆಯಲು ತಿಳಿಸಿದ್ದಾರೆ.
ಮಾರ್ಚ್ 15 ರೊಳಗೆ ತನ್ನ ದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಗಡುವು ನೀಡಿದೆ. ಚೀನಾ ಜತೆಗಿನ ಸಂಬಂಧಕ್ಕೆ ಒಲವು ತೋರಿರುವ ಮಾಲ್ಡೀವ್ಸ್ ಭಾರತ ವಿರೋಧಿ ಧೋರಣೆ ಮುಂದುವರಿಸಿದ್ದಾರೆ ಮೈಝೂ ಚೀನಾಕ್ಕೆ ತೆರಳಿದ ಮೂರು ದಿನಗಳ ನಂತರ ಈ ಘೋಷಣೆ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆ.