ದೆಹಲಿ : ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ತಮ್ಮ ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಎಎಪಿಯ ನೀತಿಯಿಂದ ಅತೃಪ್ತನಾಗಿ ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವೇ ಎಂದಿದ್ದರು. ಆದರೆ ಇಂದು ಪಕ್ಷ ಮತ್ತು ಸರ್ಕಾರ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೇನೆ ಎಂದು ರಾಜ್ ಕುಮಾರ್ ಆನಂದ್ ಹೇಳಿದ್ದಾರೆ.