ಚಂಡೀಗಢ: ಜಲಂಧರ್ನಲ್ಲಿ (Jalandhar) ಶವವಾಗಿ ಪತ್ತೆಯಾಗಿದ್ದ ಪಂಜಾಬ್‌ನ ಡಿಎಸ್‌ಪಿ (Punjab DSP), ಅರ್ಜುನ ಪ್ರಶಸ್ತಿ (Arjuna Award) ಪುರಸ್ಕೃತ ದಲ್ಬೀರ್ ಸಿಂಗ್ ಡಿಯೋಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆಯ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಡಿಎಸ್‌ಪಿ ಸಾವಿಗೆ ಒಬ್ಬ ಆಟೋ ಚಾಲಕ ಕಾರಣ ಎಂದು ತಿಳಿದುಬಂದಿದೆ. ಆಟೋ ಚಾಲಕನ (Auto Driver) ಜೊತೆಗೆ ವಾಗ್ವಾದ ನಡೆದಿದ್ದು, ಈ ಜಗಳ ವಿಕೋಪಕ್ಕೆ ತಿರುಗಿದಾದ ಪೊಲೀಸ್ ಅಧಿಕಾರಿ ಸರ್ವೀಶ್ ಪಿಸ್ತೂಲ್ ಕಸಿದುಕೊಂಡು ಆರೋಪಿ ದಲ್ಬೀರ್ ಸಿಂಗ್ರನ್ನ ಹತ್ಯೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಕೆಲಸ ಮಾಡುತ್ತಿರುವ ದಲ್ಬೀರ್ ಸಿಂಗ್ ಹೊಸ ವರ್ಷಾಚರಣೆಯ ಅಂಗವಾಗಿ ಸಂಜೆ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಿದ್ದರು. ವಾಪಸ್ಸು ಬರುವಾಗ ಆಟೋ ಡ್ರೈವರ್‌ಗೆ ತನ್ನನ್ನು ಮನೆಯ ಬಳಿ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಚಾಲಕ ನಿರಾಕರಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದು ಜಗಳಕ್ಕೆ ಕಾರಣವಾಗಿದೆ. ಈ ವೇಳೆ ಕೋಪದಲ್ಲಿ ಆಟೋ ಚಾಲಕ ದಲ್ಬೀರ್‌ನಿಂದ ಸರ್ವೀಸ್ ಗನ್ ಕಿತ್ತುಕೊಂಡು ಆತನ ಮೇಲೆ ಗುಂಡು ಹಾರಿಸಿದ್ದಾನೆ. ದಲ್ಬೀರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.