ನವದೆಹಲಿ: ಸಂಸತ್‌ನಲ್ಲಿ ನಡೆದ ಭಾಷಣದಲ್ಲಿ ನನ್ನನ್ನ ನಾನು ಬದಲಾಯಿಸಿಕೊಳ್ಳಲು ಆಗಲ್ಲ ಎನ್ನುತ್ತಾ ರಾಜ್ಯಸಭೆಯಲ್ಲಿ ಎಲ್ಲರ ಮುಂದೆ ಜಯಾ ಬಚ್ಚನ್ ಕೈಮುಗಿದಿದ್ದಾರೆ. ನನಗೆ ಮುಂಗೋಪ ಜಾಸ್ತಿ ಆದರೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟತೆ ನೀಡಿದ್ದಾರೆ.
ಈ ವರ್ಷ ನಿವೃತ್ತರಾದ ಸಂಸತ್ತಿನ ಮೇಲ್ಮನೆಯ 68 ಸಂಸದರಿಗೆ ರಾಜ್ಯಸಭೆ ಉಪಾಧ್ಯಕ್ಷ ಜಗದೀಪ್ ಧನಕರ್ ವಿದಾಯ ನೀಡಿದ್ದಾರೆ. ರಾಜ್ಯಸಭೆಯಲ್ಲಿ ವಿದಾಯ ಭಾಷಣ ವೇಳೆ ಸಂಸದೆ ಜಯಾಬಚ್ಚನ್ ಅವರು ಮಾತಾಡಿದ್ದು, ಜನ ನನ್ನನ್ನು ಯಾಕೆ ಯಾವಾಗಲೂ ಕೋಪದಲ್ಲೇ ಇರುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದು ನನ್ನ ಸ್ವಾಭಾವಿಕ ಗುಣ. ನನ್ನನ್ನು ನಾನು ಬದಲಾಯಿಸಿಕೊಳ್ಳಲು ಆಗಲ್ಲ. ನನಗೆ ಇಷ್ಟವಾಗದ ವಿಷಯಗಳನ್ನು ನಾನು ಅಂಗೀಕರಿಸಲ್ಲ. ಈ ವೇಳೆ ನಾನು ನನ್ನ ತಾಳ್ಮೆ ಕಳೆದುಕೊಂಡು ಬಿಡುತ್ತೇನೆ. ನನ್ನ ವರ್ತನೆಯಿಂದ ಯಾರಿಗಾದ್ರೂ ವೈಯಕ್ತಿಕವಾಗಿ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆಂದು ರಾಜ್ಯಸಭೆ ವಿದಾಯ ಭಾಷಣದಲ್ಲಿ ಸಂಸದೆ ಜಯಾಬಚ್ಚನ್ ಹೇಳಿದ್ದಾರೆ.