ಶಬರಿಮಲೆ : ಶಬರಿಮಲೆಯಲ್ಲಿ ಭಕ್ತರಿಗೆ ಸುಗಮ ಹಾಗೂ ಸುರಕ್ಷಿತ ದರ್ಶನ ಸೌಲಭ್ಯ ಕಲ್ಪಿಸಲು ಇದೇ ಜನವರಿ 10ರಿಂದ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. 14 ರಂದು ವರ್ಚುವಲ್ ಕ್ಯೂ ಬುಕಿಂಗ್ ಮಿತಿಯನ್ನು 50000 ಮತ್ತು ಮಕರ ಜ್ಯೋತಿ ದಿನದಂದು 40,000ಕ್ಕೆ ಸೀಮಿತಗೊಳಿಸಲಾಗಿದೆ.
ಭಕ್ತರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ತಪ್ಪಿಸಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ ಮಕರವಿಳಕಕ್ಕೆ ಮೂರು ದಿನ ಮುಂಚಿತವಾಗಿ ದರ್ಶನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರು ಮಕರವಿಳಕ್ ಮತ್ತು ತಿರುವಾಭರಣ ದರ್ಶನಕ್ಕಾಗಿ ಸನ್ನಿಧಾನದಿಂದ ಹೊರಡದೆ ಶಬರಿಮಲೆಯ ವಿವಿಧ ಸ್ಥಳಗಳಲ್ಲಿ ಬಿಡಾರ ಹೂಡುತ್ತಾರೆ.
ಹೀಗೆ ಹೆಚ್ಚಿನ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಬೆಟ್ಟ ಹತ್ತಿದರೆ ಭದ್ರತೆ ಹಾಗೂ ಸುಗಮ ದರ್ಶನ ಸೌಲಭ್ಯದ ಮೇಲೆ ಪರಿಣಾಮ ಬೀರಲಿದೆ. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಸುರಕ್ಷಿತ ದರ್ಶನ ನೀಡುವ ನಿಟ್ಟಿನಲ್ಲಿ ಸ್ಪಾಟ್ ಬುಕ್ಕಿಂಗ್ ತಪ್ಪಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದರು.