ನವದೆಹಲಿ: ವಿಮಾನ ಟೇಕ್ ಆಫ್ ತಡವಾಗಲಿದೆ ಎಂದು ಘೋಷಿಸಿದ ಪೈಲಟ್ ಮೇಲೆ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಇಂಡಿಗೋ ವಿಮಾನದ ಪೈಲಟ್ ಮೇಲೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಮಂಜಿನಿಂದಾಗಿ ಪ್ರಯಾಣವನ್ನು ಸ್ಥಗಿತಗೊಳಿಸಿತ್ತು. ದಟ್ಟವಾದ ಹಿಮದ ಕಾರಣ, ಅಧಿಕಾರಿಗಳು ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಲಿಲ್ಲ.
ಪ್ರಯಾಣ ವಿಳಂಬವಾಗಲಿದೆ ಎಂದು ಪೈಲಟ್ ಘೋಷಿಸಿಸುತ್ತಿದ್ದಾಗ, ಇದನ್ನು ಕೇಳಿದ ಒಬ್ಬ ಪ್ರಯಾಣಿಕನು ಕೋಪಗೊಂಡಿದ್ದಾನೆ. ಕೊನೆಯ ಸಾಲಿನಲ್ಲಿ ಕುಳಿತಿದ್ದ ಆತ ಪೈಲಟ್ ಕಡೆಗೆ ಧಾವಿಸಿ ದಾಳಿ ನಡೆಸಿದ್ದಾನೆ. ಈ ಘಟನೆ ಬಗ್ಗೆ ಇಂಡಿಗೋ ದೂರು ನೀಡಿದೆ. ಆತನನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ. ವಿಮಾನವು 13 ಗಂಟೆಗಳ ಕಾಲ ವಿಳಂಬವಾಗಿದೆ ಎಂದು ತಿಳಿದುಬಂದಿದೆ.