ಬೆಂಗಳೂರು : ರೇಣುಕಾಸ್ವಾಮಿ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಹಾಗೂ ದರ್ಶನ್ ನ್ಯಾಯಾಲಯ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ.
ಹಿರಿಯ ಅಧಿಕಾರಿಗಳು ಪವಿತ್ರಾ ಗೌಡಗೆ ಮೇಕಪ್ ಮಾಡೋಕೆ ಯಾಕೆ ಬಿಟ್ಟಿದ್ದೀರಿ ಎಂದು ಕಾರಣ ಕೇಳಿ ಪಿಎಸ್ ಐ ಗೆ ನೊಟೀಸ್ ನೀಡಿದ್ದರು. ಹಿರಿಯ ಅಧಿಕಾರಿಗಳ ನೋಟಿಸ್ ಗೆ ಉತ್ತರ ನೀಡಿರುವ ಪಿಎಸ್ ಐ ಗೀತಾ ವಾಶ್ ರೂಂ ಗೆ ಹೋಗಿದ್ದ ವೇಳೆ ಪವಿತ್ರಾಗೌಡ ಮೇಕಪ್ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಮಹಜರು ವೇಳೆ ವಾಶ್ ರೂಂಗೆ ಹೋಗ್ಬೇಕು ಎಂದು ಪವಿತ್ರಾ ಗೌಡ ಹೇಳಿದ್ದರು. ಅದಕ್ಕೆ ಆಯ್ತು ಅಂದಿದ್ದೆವು. ಅವರು ವಾಶ್ ರೂಂನಲ್ಲಿ ಮೇಕಪ್ ಐಟಂಗಳನ್ನು ಇಟ್ಟಿದ್ದು ಆಗ ಮೇಕಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ.