ದೆಹಲಿ : ಲೋಕಸಭೆಯ (Lok sabha Election) 543 ಸ್ಥಾನಗಳಿಗೆ ಏಪ್ರಿಲ್ 19 ರಂದು ಪ್ರಾರಂಭವಾಗುವ ಚುನಾವಣೆಯು ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಆಯೋಗವು (Election Commission) ಇಂದು (ಶನಿವಾರ) ಸಂಜೆ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, 543 ಲೋಕಸಭಾ ಸ್ಥಾನಗಳ ಬದಲಿಗೆ 544 ಕ್ಷೇತ್ರ ಎಂದು ಹೇಳಿದೆ. ಹಾಗಾದರೆ ಒಂದು ಕ್ಷೇತ್ರ ಸೇರ್ಪಡೆ ಆಗಿದೆಯೇ ಎಂಬ ಯೋಚನೆ ನಿಮಗೆ ಬರದೇ ಇರದು.
ಮಣಿಪುರದ ಎರಡು ಕ್ಷೇತ್ರಗಳಲ್ಲಿ ಒಂದಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಈ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 544 ಎಂದು ಅವರು ಹೇಳಿದ್ದಾರೆ.
ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದ ಒಳಭಾಗ ಮತ್ತು ಹೊರ ಮಣಿಪುರದ ಕೆಲವು ಭಾಗಗಳಲ್ಲಿ ಏಪ್ರಿಲ್ 19 ರಂದು ಹಂತ 1 ರಲ್ಲಿ ಮತ್ತು ಏಪ್ರಿಲ್ 26 ರಂದು 2 ನೇ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ಭಾಗಗಳು ಹೊರ ಮಣಿಪುರ ಮತ್ತೆ ಮತ ಚಲಾಯಿಸಲಿದೆ.