ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಫುಡ್ ಪಾಯ್ಸನ್ನಿಂದಾಗಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಇಲ್ಲಿನ ಪೆರಿಂಞನಂ ಎಂಬ ಪ್ರದೇಶದ ಸ್ಥಳೀಯ ರೆಸ್ಟೋರೆಂಟ್‌ನಿಂದ ಕುಝಿಮಂದಿ (ಬಿರಿಯಾನಿ ಮಾದರಿಯ ಖಾದ್ಯ) ಸೇವಿಸಿದ ನಂತರ ಸುಮಾರು 178 ಜನರು ಅಸ್ವಸ್ಥರಾಗಿದ್ದಾರೆ.
ಬೇಧಿ ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳು ಇವರಲ್ಲಿ ಕಂಡು ಬಂದಿದ್ದು ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಕುಟಿಲಕ್ಕಡವ್ ನಿವಾಸಿ ಉಝೈಬಾ (56) ಎಂದು ಗುರುತಿಸಲಾಗಿದೆ. ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಆಕೆಗೆ ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಉಝೈಬಾ ಮತ್ತು ಆಕೆಯ ಇಬ್ಬರು ಸಂಬಂಧಿಕರು ಕೂಡಾ ಅಸ್ವಸ್ಥರಾಗಿದ್ದರು
ಕೇರಳದ ಮಾಂಸಾಹಾರಿ ರೆಸ್ಟೋರೆಂಟ್‌ಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಸುವಾಸನೆಯ ಅಕ್ಕಿ ಮತ್ತು ಮಾಂಸವನ್ನು ಒಳಗೊಂಡಿರುವ ಯೆಮೆನ್ ಮೂಲದ ಕುಝಿಮಂದಿ ಜತೆ ಬಡಿಸಿದ ಮಯೋನಿಸ್ನಿಂದ ಆಹಾರದಿಂದ ವಿಷ ಉಂಟಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ