ಬೆಂಗಳೂರು : ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿದ ಬಾಲರಾಮನ ವಿಗ್ರಹವನ್ನು ಕೆತ್ತನೆ ಮಾಡಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸನ್ಮಾನಿಸಿದರು.
ಇಂದು ಅರುಣ್ ಅವರು ತಮ್ಮ ಪತ್ನಿ ವಿಜೇತ, ಮಗಳು ಸಾನ್ವಿ ಮತ್ತು ಮಗ ವೇದಾಂತ್ ಜೊತೆ ರಾಜಭವನಕ್ಕೆ ಭೇಟಿ ನೀಡಿ ಸನ್ಮಾನವನ್ನು ಸ್ವೀಕರಿಸಿದರು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ನಂತರ ಅರುಣ್ ಅವರು ರಾಜ್ಯಪಾಲರು ಹಾಗೂ ಮಾಜಿ ರಾಷ್ಟ್ರಪತಿಯವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಅರುಣ್ ಅವರು ಬಾಲರಾಮನ ವಿಗ್ರಹದ ಬಗ್ಗೆ ವಿವರಣೆಯನ್ನು ನೀಡಿದರು