ಭಾರತ ಮತ್ತು ಅಮೆರಿಕಾ (Indian-America) ನಡುವೆ ಸುಂಕದ ಸಮರ ಶುರುವಾಗಿದೆ. ರಷ್ಯಾ ಜೊತೆಗಿನ ಭಾರತದ ಬಾಂಧವ್ಯವನ್ನು ನೋಡಲಾಗದ, ಭಾರತದ ಅಭಿವದ್ಧಿಯನ್ನು ಸಹಿಸಲಾಗದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸುಂಕದ ಸಮರ ಶುರು ಮಾಡಿದ್ದರು.
ಅಮೆರಿಕ ಸುಂಕ ಘೋಷಣೆ ಬೆನ್ನಲ್ಲೇ ಇತ್ತ ಪ್ರಧಾನಿ ಮೋದಿ ಜಪಾನ್, ಚೀನಾಗೆ ಭೇಟಿ ನೀಡಿದ್ದಾರೆ. ಈ ವೇಳೆ ನರೇಂದ್ರ ಮೋದಿ ಚೀನಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.