ರಾಜ್ಯದಲ್ಲಿ ಮೇ 7 ರಂದು 2ನೇ ಹಂತದ ಲೋಕಸಭೆ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿವೆ.
ಭಾರತದಲ್ಲಿ 18ನೇ ಸಾರ್ವತ್ರಿಕ ಲೋಕಸಭೆಗೆ ಚುನಾವಣೆ ಆರಂಭವಾಗಿದೆ. ಏಳು ಹಂತಗಳಲ್ಲಿ ಈ ಬಾರಿಯ ಚುನಾವಣೆ ಪೂರ್ಣಗೊಳ್ಳಬೇಕಿದೆ. ಇದರ ಮೊದಲ ಹಂತವು 19 ಏಪ್ರಿಲ್ 2024 ರಂದು ಆರಂಭವಾಗಿದ್ದು, ಇದರಲ್ಲಿ 102 ಕ್ಷೇತ್ರಗಳಲ್ಲಿ ಮತ ಚಲಾಯಿಸಲಾಯಿತು. ಇಂದು ಅಂದರೆ ಏಪ್ರಿಲ್ 26ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ಸೇರಿ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾರರು ಮತ ಚಲಾಯಿಸಲಿದ್ದಾರೆ.