ಹೈದರಾಬಾದ್ : ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು (under construction bridge) ಗಾಳಿಗೆ ಕುಸಿದ ಘಟನೆ ಬೆಳಕಿಗೆ ಬಂದಿದೆ. ಸೇತುವೆ ಎರಡು ಪಿಲ್ಲರ್ ನಡುವೆ ಇದ್ದ ಐದು ಕಾಂಕ್ರೀಟ್ ಸ್ಲ್ಯಾಬ್ಗಳ ಪೈಕಿ ಎರಡು ಸ್ಲ್ಯಾಬ್ಗಳು (concrete girders) ಕುಸಿದಿವೆ. ಸೋಮವಾರ ರಾತ್ರಿ 9:45ಕ್ಕೆ ಈ ಘಟನೆ ಸಂಭವಿಸಿದೆ. ಬಲವಾಗಿ ಗಾಳಿ ಬೀಸಿದ ಪರಿಣಾಮ ನಿರ್ಮಾಣ ಹಂತದ ಈ ಸೇತುವೆ ಭಾಗಶಃ ಕುಸಿದಿರುವುದು ಗೊತ್ತಾಗಿದೆ
ಕಳೆದ ಐದಾರು ವರ್ಷದಿಂದ ಕಾಮಗಾರಿ ನಿಂತುಹೋಗಿದ್ದ ನಿರ್ಮಾಣ ಹಂತದ ಸೇತುವೆಯೊಂದು ಪ್ರಬಲ ಗಾಳಿಗೆ ಪತನಗೊಂಡ ಘಟನೆ ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 22, ಸೋಮವಾರ ರಾತ್ರಿ ಸಂಭವಿಸಿದೆ. 2016ರಲ್ಲಿ ಈ 1 ಕಿಮೀ ಉದ್ದದ ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಡಲಾಗಿತ್ತು. ಎರಡು ವರ್ಷದಲ್ಲಿ ಕಾರಣಾಂತರದಿಂದ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದ. ಇದೇ ಗುತ್ತಿಗೆದಾರ ನಿರ್ಮಿಸಿದ್ದ ಮತ್ತೊಂದು ಸೇತುವೆ 2021ರಲ್ಲಿ ಮಹಾಮಳೆಗೆ ಕೊಚ್ಚಿಹೋಗಿತ್ತು.