ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ ವಿವಾಹವು ಸದ್ಯದ ಟ್ರೆಂಡಿಂಗ್ ಟಾಪಿಕ್. ಬಹುಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಅದ್ಧೂರಿ ಮದುವೆಯಲ್ಲಿ ಗಣ್ಯಾತಿಗಣ್ಯರೆಲ್ಲ ಭಾಗಿಯಾಗಿದ್ದಾರೆ. ಪ್ರಪಂಚದಾದ್ಯಂತ ಈ ಮದುವೆ ಚರ್ಚೆಯಾಗುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಆಯೋಜಿಸಿದ್ದ ಅಂಬಾನಿ ಕುಟುಂಬದ (Ambani Family) ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶದ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಮೂರು ದಿನಗಳ ಈವೆಂಟ್‌ನಲ್ಲಿ ಬಾಲಿವುಡ್‌ನ ಎಲ್ಲಾ ತಾರೆಯರು ಭಾಗವಹಿಸಿ ತಮ್ಮ ನೃತ್ಯ, ಅಭಿನಯ, ಮನೋರಂಜನೆ ಮೂಲಕ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕೆ ಮೋಡಿ ಮಾಡಿದರು. ಸಮಾರಂಭದ ಕೊನೆಯ ದಿನ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅದ್ಭುತ ಪ್ರದರ್ಶನ ನೀಡಿದರು.