ಚೀನಾ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಅವರ ವಿದೇಶಾಂಗ ನೀತಿ ಬಗ್ಗೆ ಚೀನಾ ಮೆಚ್ಚುಗೆ ಸೂಚಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ‘ಕ್ಷಿಪ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ’ ಮತ್ತು ‘ಮಹಾ ಶಕ್ತಿ ತಂತ್ರ’ವನ್ನು ಸಾಧಿಸಿದೆ. ಈ ಮೂಲಕ ಭಾರತ ವಿಶ್ವದ ಭಾರತ ವಿಶ್ವದ ಮಹಾನ್ ಶಕ್ತಿಯಾಗುತ್ತಿದೆ ಅಂತ ದಿ ಗ್ಲೋಬಲ್ ಟೈಮ್ಸ್ ಬರೆದಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) (Chinese Communist Party) ಮುಖವಾಣಿಯಾಗಿರುವ ದಿ ಗ್ಲೋಬಲ್ ಟೈಮ್ಸ್ (The Global Times) ಟ್ಯಾಬ್ಲಾಯ್ಡ್‌ನಲ್ಲಿ ಮೋದಿ ಆಡಳಿತ ಹಾಗೂ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆಯಲಾಗಿದೆ.