ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದ್ದ ಶ್ರೀಲಂಕಾ ಚೇತರಿಕೆ ಕಾಣುತ್ತಿದ್ದು, ಸಹಾಯ ಮಾಡಿದ ಭಾರತವನ್ನ ಹಾಡಿ ಹೊಗಳಿದೆ.
ಎರಡು ಕಠಿಣ ವರ್ಷಗಳ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಚೇತರಿಸಿಕೊಂಡಿದೆ. ಭಾರತದಿಂದ ಪಡೆದ $ 3.5 ಬಿಲಿಯನ್ ಆರ್ಥಿಕ ನೆರವಿನಿಂದ ಇದು ಸಾಧ್ಯವಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಶನಿವಾರ ಹೇಳಿದ್ದಾರೆ.
ಇದು ಚೀನಾದ ಮತ್ಸರಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪ ರಾಷ್ಟ್ರವು ಭಾರತ ನೀಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ.