ವರದಿಯ ಪ್ರಕಾರ, ರೈಲಿನಲ್ಲಿ ಆಹಾರ ವಿತರಣೆ, ಟಿಕೆಟ್ ನಿರ್ವಹಣೆ ಮತ್ತು ಇತರ ಸೇವೆಗಳಂತಹ ವ್ಯಾಪಕ ಶ್ರೇಣಿಯ ಸೇವೆಗಳನ್ನು ಅಪ್ಲಿಕೇಶನ್ ಒಳಗೊಂಡಿದೆ.
ವಿವಿಧ ರೈಲು ಸೇವೆಗಳು ಒಂದೇ ಕಡೆ ಸಿಗುವಂತೆ ಮಾಡಲು ಭಾರತೀಯ ರೈಲ್ವೆ ಮುಂದಾಗುತ್ತಿದೆ. ಒಂದೆಡೆ ಎಲ್ಲ ಸೇವೆಗಳನ್ನು ನೀಡಲು “ಸೂಪರ್ ಆ್ಯಪ್” ಅಭಿವೃದ್ಧಿಪಡಿಸುತ್ತಿದೆ.
IRCTC ರೈಲ್ ಕನೆಕ್ಟ್, ರಾಷ್ಟ್ರೀಯ ರೈಲು ವಿಚಾರಣೆ ವ್ಯವಸ್ಥೆ, ಕಾಯ್ದಿರಿಸದ ಟಿಕೆಟಿಂಗ್ ಅಥವಾ UTS ಮತ್ತು ರೈಲ್ ಮದದ್, ಭಾರತೀಯ ರೈಲ್ವೆಯ ಕುಂದುಕೊರತೆ ಪರಿಹಾರ ವ್ಯವಸ್ಥೆಗಳಂತಹ ಎಲ್ಲ ಸೇವೆಗಳು ಈ ಸೂಪರ್ ಆ್ಯಪ್ ಒಂದೆರಲ್ಲೇ ದೊರೆಯಲಿದೆ.
ರೈಲ್ವೆ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ಸೆಂಟರ್ ಆಫ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ನಲ್ಲಿ (CRIS) ಸೂಪರ್ ಆ್ಯಪ್ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿದೆ.