ವಾಷಿಂಗ್ಟ್ನ್ ಡಿ.ಸಿ.: ಭಾರತದೊಂದಿಗೆ ಸುಂಕ ಸಂಘರ್ಷದೊಂದಿಗೆ ಅಮೆರಿಕದ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಸೇರಿದಂತೆ ಪ್ರಮುಖ ನಾಯಕರು ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತ ಹಾಗೂ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ (Peter Navarro) ಅವರು, ಭಾರತವನ್ನು ಸುಂಕಗಳ ಮಹಾರಾಜ ಎಂದು ಕರೆಯುವ ಮೂಲಕ ಪ್ರಸ್ತುತ ನಡೆಯುತ್ತಿರುವ ಸುಂಕ ಸಂಘರ್ಷಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ರಷ್ಯಾದ ತೈಲ ಖರೀದಿಯ ಕಾರಣ ನೀಡಿ, ಎರಡು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಒಟ್ಟ ಶೇ. 50 ರಷ್ಟು ಸುಂಕ ವಿಧಿಸಿ ಕಾರ್ಯಕಾರಿ ಆದೇಶ ಹೊರಡಿಸಿದರು. ಇದು, ಯಾವುದೇ ರಾಷ್ಟ್ರದ ಮೇಲೆ ಅಮೆರಿಕ ಹಾಕಿದ ಅತಿ ಹೆಚ್ಚು ಸುಂಕವಾಗಿದೆ. (ಬ್ರೆಜಿಲ್ ರಾಷ್ಟ್ರದ ಮೇಲೂ, ಭಾರತದಂತಯೇ ಶೇ. 50 ರಷ್ಟು ಸುಂಕ ವಿಧಿಸಿದ್ದಾರೆ.) ಇದರ ನಡುವೆ, ಅಮೆರಿಕದ ನಾಯಕರು ಒಬ್ಬಬ್ಬರಾಗಿ ಭಾರತದ ಮೇಲೆ ಸುಂಕ ನೆಪ ಇಟ್ಟು ಭಂಡವಾದ ಮಾಡುತ್ತಿದ್ದಾರೆ ಎನ್ನವಹುದು.