ನವದೆಹಲಿ: ದ್ವೀಪ ರಾಷ್ಟ್ರ ತೈವಾನ್ (Taiwan) ಮತ್ತು ಭಾರತದ (India) ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಟೀಕೆಗೆ ತೈವಾನ್ ಇಂದು (ಮಂಗಳವಾರ) ಚೀನಾಗೆ (China) ತಿರುಗೇಟು ನೀಡಿದೆ. ಚೀನಾದ ಟೀಕೆಗಳಿಗೆ ತಮ್ಮ ಅಧ್ಯಕ್ಷರಾಗಲೀ ಅಥವಾ ಭಾರತದ ಪ್ರಧಾನಿ ನರೇಂದ್ರ ಮೋದಿಯಾಗಲೀ (PM Narendra Modi) ಹೆದರುವುದಿಲ್ಲ ಎಂದು ತೈವಾನ್ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್-ಕ್ವಾಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ತೈವಾನ್ ಅಧ್ಯಕ್ಷ ಲಾಯ್ ಚಿಂಗ್ ಟೆ ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ ನಂತರ ತೈವಾನ್ ಈ ಟೀಕೆ ಮಾಡಿದೆ. 2024ರಲ್ಲಿ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದಕ್ಕಾಗಿ ನರೇಂದ್ರ ಮೋದಿಯನ್ನು ಅಭಿನಂದಿಸಿದ್ದರು.
ಕಳೆದ ತಿಂಗಳು ಚುನಾಯಿತರಾದ ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಅವರು ಜೂನ್ 7ರಂದು ಎಕ್ಸ್ ಪೋಸ್ಟ್‌ನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದರು. “ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಗೆಲುವಿಗಾಗಿ ನನ್ನ ಪ್ರಾಮಾಣಿಕ ಅಭಿನಂದನೆಗಳು.