ಪಟಿಯಾಲ: 10 ವರ್ಷದ ಬಾಲಕಿ ಮಾನ್ವಿ ಪಾಲಿಗೆ ಹುಟ್ಟುಹಬ್ಬ ಮರಣ ದಿನವಾಗಿದೆ. ಆನ್ ಲೈನ್ ಮೂಲಕ ಬಂದ ಬರ್ತ್ ಡೇ ಕೇಕ್ ಬಾಲಕಿಗೆ ಯಮಪಾಷಣವಾಗಿದೆ.
ಪಂಜಾಬ್ ನ ಪಟಿಯಾಲದಲ್ಲಿ ಕಳೆದ ವಾರ 10 ವರ್ಷದ ಬಾಲಕಿ ಆನ್ ಲೈನ್ ನಲ್ಲಿ ತರಿಸಿದ ಕೇಕ್ ನಿಂದ ಫುಡ್ ಪಾಯ್ಸನ್ ಆಗಿ ಸಾವನ್ನಪ್ಪಿರುವುದು ವರದಿಯಾಗಿದೆ.
ಮೃತ ಬಾಲಕಿ ಸಂತೋಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮದಲ್ಲಿರುವ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೃತ ಬಾಲಕಿ ಹೆಸರು ಮಾನ್ವಿ. ಕ್ಯೂಟ್ ಆಗಿ ಮುಗ್ಧ ನಗುವಿನಲ್ಲಿ ಕೇಕ್ ಕಟ್ ಮಾಡಿ ಎಲ್ಲರ ಜೊತೆ ಸಂಭ್ರಮಿಸುತ್ತಿರುವ ಮಾನ್ವಿ ವಿಡಿಯೋ ಆಗ ಎಲ್ಲರ ಮನಕಲಕುವಂತೆ ಮಾಡಿದೆ