ಮುಂಬೈ: ಲೋಕಸಭಾ ಚುನಾವಣೆಗೆ (Lok Sabha Election) ದಿನಾಂಕ ನಿಗದಿಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು (Political Parties) ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿವೆ. ಕೆ
ಇಲ್ಲೊಬ್ಬ ಸ್ವತಂತ್ರ ಅಭ್ಯರ್ಥಿ ವಿಚಿತ್ರ ಭರವಸೆ ನೀಡಿ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ (Maharashtra) ಚಂದ್ರಾಪುರ ಸಂಸದ ಸ್ಥಾನದಿಂದ ಸ್ಪರ್ಧಿಸಿರುವ ವನಿತಾ ರಾವುತ್ (Vanita Raut) ತಮ್ಮನ್ನು ಗೆಲ್ಲಿಸಿದರೆ ಸಬ್ಸಿಡಿಯಲ್ಲಿ ಜನರಿಗೆ ಆಲ್ಕೋಹಾಲ್ ಕೊಡಿಸುವುದಾಗಿ ಘೋಷಣೆ ಮಾಡಿದ್ದಾರೆ.
ಚಂದ್ರಾಪುರ ಜಿಲ್ಲೆಯ ಚಿಮೂರ್ ಗ್ರಾಮದ ನಿವಾಸಿ ವನಿತಾ ರಾವುತ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಸಬ್ಸಿಡಿ ಆಧಾರದ ಮೇಲೆ ಜನರಿಗೆ ವಿಸ್ಕಿ ಮತ್ತು ಬಿಯರ್ ಕೊಡಿಸುವುದಾಗಿ ಘೋಷಿಸಿದ್ದಾರೆ. 2019ರಲ್ಲಿಯೂ ಸ್ಪರ್ಧಿಸಿದ್ದ ರಾವುತ್ ಅದೇ ಭರವಸೆಯ ಮೇರೆಗೆ ಪ್ರಚಾರ ಮಾಡಿದ್ದರು