ಡೇರಾಘಾಜಿ ಖಾನ್: ಡೇರಾ ಘಾಜಿ ಖಾನ್‌ನಲ್ಲಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಪಾಕಿಸ್ತಾನವನ್ನು ಪ್ರಸ್ತುತ ಸವಾಲುಗಳಿಂದ ಹೊರತಂದು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ನಾವು ಭಾರತವನ್ನು ಹಿಂದೆ ಬಿಡದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ. ನಾವು ಪಾಕಿಸ್ತಾನವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ ಮತ್ತು ಭಾರತಕ್ಕಿಂತ ಮುಂದೆ ಸಾಗುತ್ತೇವೆ ಎಂದು ಭಾರತವನ್ನು ಹಿಂದಿಕ್ಕುವ ದೃಢಸಂಕಲ್ಪವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವ್ಯಕ್ತಪಡಿಸಿದ್ದಾರೆ.