ಪುಣೆಯಲ್ಲಿ ಸಂಭವಿಸಿದ ಪೋರ್ಷೆ ಕಾರು ಅಪಘಾತದ ಬಳಿಕ ಎಚ್ಚೆತ್ತಿರುವ ಮಹಾರಾಷ್ಟ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಪಬ್ ಹಾಗೂ ಬಾರ್ಗಳಲ್ಲಿ ಮದ್ಯಪಾನ ಮಾಡಲು ಸರ್ಕಾರಿ ಗುರುತಿನ ಚೀಟಿ ಇರಲೇಬೇಕೆಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮದ್ಯ ಪ್ರಿಯರಿಗಾಗಿ ಸರಕಾರ ಈಗ ನಿಯಮ ರೂಪಿಸಿದೆ. ಸರ್ಕಾರದಂತೆಯೇ ಪಬ್, ಬಾರ್ ಮಾಲೀಕರೂ ಕೂಡ ಮುತುವರ್ಜಿ ವಹಿಸಿದ್ದಾರೆ.
ಮುಂಬೈ ಮತ್ತು ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ ಸೇವಿಸುವವರಿಗೆ ವಯಸ್ಸಿನ ಪ್ರಮಾಣ ಪತ್ರ ಅಗತ್ಯವಾಗಲಿದೆ. ಪುಣೆ, ಮುಂಬೈ, ನಾಗ್ಪುರದಂತಹ ದೊಡ್ಡ ನಗರಗಳಲ್ಲಿ ಅಪ್ರಾಪ್ತ ವಯಸ್ಕರು ಮದ್ಯಪಾನ ಮಾಡಿ ಅತಿವೇಗದಲ್ಲಿ ವಾಹನ ಚಲಾಯಿಸುವ ಅನೇಕ ಪ್ರಕರಣಗಳಿವೆ. ಹಾಗಾಗಿ ಈಗ ಮುಂಬೈ ಪುಣೆಯಲ್ಲಿ ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಸೇವಿಸುವ ಮುನ್ನ ವಯಸ್ಸಿನ ಪ್ರಮಾಣ ಪತ್ರವನ್ನು ಪರಿಶೀಲಿಸಲಾಗುವುದು.
.