ಅಮೆರಿಕ : 2025 ರ ನೊಬೆಲ್ ಶಾಂತಿ ಪ್ರಶಸ್ತಿಯ ಘೋಷಣೆಯು ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾದಾದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಹೆಸರನ್ನು ನೊಬೆಲ್ ಪ್ರಶಸ್ತಿ ಸಿಗದೇ ಇರುವುದರಿಂದ ಟ್ರಂಪ್ ಜೊತೆಗೆ ಶ್ವೇತಭವನವೂ ಕೋಪಗೊಂಡಿದೆ.
ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, “ನೊಬೆಲ್ ಸಮಿತಿಯು ಮತ್ತೊಮ್ಮೆ ಶಾಂತಿಯ ಮೇಲೆ ರಾಜಕೀಯವನ್ನು ಆದ್ಯತೆಯಾಗಿ ಇಟ್ಟಿದೆ” ಎಂದು ಹೇಳಿದ್ದಾರೆ.