ಥಾಯ್ಲೆಂಡ್: ಫೆಬ್ರವರಿ 27ರಂದು 49 ವರ್ಷದ ಥಾಯ್ ಎಂಬ ವ್ಯಕ್ತಿ ದೇವಾಲಯದ ಮುಖ್ಯ ಸಭಾಂಗಣವನ್ನು ಧ್ವಂಸಗೊಳಿಸುತ್ತಿದ್ದಾಗ, ಬುದ್ಧನ ಪ್ರತಿಮೆಯ ತೀಕ್ಷ್ಣವಾದ ಭಾಗವೊಂದು ಅವನ ತಲೆ ಮತ್ತು ಎದೆಗೆ ಚುಚ್ಚಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ ಸಾಕಷ್ಟು ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಮೃತಪಟ್ಟಿರುವ ಘಟನೆ ಥಾಯ್ಲೆಂಡ್‌ನ ಚೋನ್‌ಬುರಿ ಪ್ರಾಂತ್ಯದ ಬಾನ್‌ಬಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ದೇವಾಲಯದ ಒಳಗೆ ಏಕಾಏಕಿ ನುಗ್ಗಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಂತೆ ಅಲ್ಲಿದ್ದ ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು ಪ್ರಯತ್ನಿಸಿದ್ದರು, ಆದರೆ ಬೌದ್ಧ ಸನ್ಯಾಸಿಗಳ ಮೇಲೂ ಹಲ್ಲೆ ನಡೆಸಿ ದೇವರ ವಿಗ್ರಹವನ್ನು ಕೆಡವಲು ಮುಂದಾದ ವೇಳೆ ಏಕಾಏಕಿ ನೆಲದ ಮೇಲೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ.