ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ದುರಂತ ಬರೋಬ್ಬರಿ 179 ಪ್ರಯಾಣಿಕರನ್ನು ಬಲಿಪಡೆದಿದೆ. ಲ್ಯಾಂಡಿಂಗ್ ಗೇರ್ ಜಾಮ್ ಆದ ಪರಿಣಾಮ ಒಂದು ಕಾರಣವಾದರೆ, ಪಕ್ಷಿಗಳ ಬಡಿತ ಮತ್ತು ಕೆಟ್ಟ ಹವಾಮಾನ ಕೂಡ ಅವಘಡಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕೊರಿಯಾದ ಅತ್ಯಂತ ಜನಪ್ರಿಯ ಬಜೆಟ್ ಏರ್‌ಲೈನ್ ಜೆಜು ಏರ್‌ನ 7C 2216 ವಿಮಾನವು ಸುಮಾರು 09:00 ಗಂಟೆಗೆ (00:00 GMT) ಮುವಾನ್‌ಗೆ ಆಗಮಿಸಿತು. ರನ್‌ವೇನಲ್ಲಿ ಸೇಫ್ ಲ್ಯಾಂಡಿಂಗ್ ಮಾಡಲು ಇಳಿಯುತ್ತಿತ್ತು. ಆದರೆ ಅಷ್ಟೊತ್ತಿಗಾಗಲೇ ಏರ್ ಟ್ರಾಫಿಕ್ ಕಂಟ್ರೋಲ್ ಬರ್ಡ್ಸ್ ಸ್ಟ್ರೈಕ್ ಬಗ್ಗೆ ಎಚ್ಚರಿಕೆ ರವಾನಿಸಿತು. ಹಕ್ಕಿ ಹೊಡೆತ ಕೂಡ ಅಪಾಯ ಉಂಟು ಮಾಡುವ ಕಾರಣ ಏರ್ ಟ್ರಾಫಿಕ್ ಕಮಾಂಡ್ ವಿಮಾನವನ್ನು ವಿರುದ್ಧ ದಿಕ್ಕಿನಿಂದ ಇಳಿಸಲು ಅನುಮತಿ ನೀಡಿದರು.