ಕೊಲ್ಕತ್ತಾ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ನಿನ್ನೆ ಜಾರಿ ನಿರ್ದೇಶನಾಲಯ (Enforcement Directorate) ಕೇಸ್ ದಾಖಲಿಸಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹುವಾ ಮೊಯಿತ್ರಾ ಅವರಿಗೆ ಅವರ ತಾಯಿ ಕಳುಹಿಸಿರುವ ಮೆಸೇಜ್ ಸಾಕಷ್ಟು ಸುದ್ದಿ ಮಾಡುತ್ತಿದೆ. ತಾಯಿ ತಮಗೆ ಮಾಡಿರುವ ಮೆಸೇಜ್ ಅನ್ನು ಮಹುವಾ ಮೊಯಿತ್ರಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಹೆಸರಿನಲ್ಲಿ ಪವರ್ ಆಫ್ ಅಟಾರ್ನಿಯನ್ನು ಸಿದ್ಧಪಡಿಸಿಕೊಂಡಿರು. ಅವರು (ED) ಏನಾದರೂ ನಿನ್ನನ್ನು ಬಂಧಿಸಿದರೆ ನಾನು ನಿನ್ನ ಹೆಸರಿನಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ. ಮಹುವಾ ಮೊಯಿತ್ರಾ ತಾಯಿ ಮಂಜು ಮೊಯಿತ್ರಾ ಅವರು ಮಗಳಿಗೆ ಈ ರೀತಿ ಮೆಸೇಜ್ ಮಾಡಿದ್ದಾರೆ . ಮೆಸೇಜ್ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಮಹುವಾ ಮೊಯಿತ್ರಾ ಇಡಿ, ಸಿಬಿಐ ಕೇಸ್ ದಾಖಲಿಸಿದ್ದಕ್ಕೆ ನನ್ನ ಅಮ್ಮನ ಪ್ರತಿಕ್ರಿಯೆ ಹೀಗಿದೆ ಎಂದು ಬರೆದುಕೊಂದ್ದಾರೆ. ಜೊತೆಗೆ ನೀನು ನಿಜವಾದ ಸಿಂಹಿಣಿ ಎಂದು ಅಮ್ಮನನ್ನು ಬಣ್ಣಸಿದ್ದಾರೆ