ಕರ್ನಾಟಕ ಸರ್ಕಾರವು IRCTC ಲಿಮಿಟೆಡ್ ಸಹಯೋಗದೊಂದಿಗೆ “ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರಾ” (Karnataka Bharat Gaurav Yatra) ಥೀಮ್ ಆಧಾರಿತ ತೀರ್ಥಯಾತ್ರೆಯ ಪ್ರವಾಸ ಆರಂಭಿಸಿದೆ. ಭಾರತ್ ಗೌರವ್ ಟೂರಿಸ್ಟ್ ರೈಲಿನ 6 ದಿನಗಳ ಪ್ರಯಾಣದಲ್ಲಿ ದೈವಿಕ ನಗರಗಳೆಂದೇ ಪ್ರಸಿದ್ಧವಾದ ತಿರುವನಂತಪುಂ, ಕನ್ಯಾಕುಮಾರಿ, ರಾಮೇಶ್ವರಂ ಮತ್ತು ಮಧುರೈನ ಪ್ರಮುಖ ಪವಿತ್ರ ಸ್ಥಳಗಳನ್ನು (IRCTC Travel Plan) ಒಳಗೊಂಡಿದೆ.
ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ”ಯ ಅಡಿಯಲ್ಲಿ 5 ರಾತ್ರಿ/6 ದಿನಗಳ ಪ್ರವಾಸ ನಡೆಯಲಿದೆ. ಜುಲೈ 1ರಂದು ಈ ಪ್ರವಾಸವು ಆರಂಭವಾಗಲಿದ್ದು, ಕರ್ನಾಟಕ ಸರ್ಕಾರ ಸಹ ಈ ಪ್ರವಾಸ ಮಾಡುವವರಿಗೆ ಬರೋಬ್ಬರಿ 5 ಸಾವಿರ ರೂ. ಸಹಾಯಧನವನ್ನು ಸಹ ನೀಡಲಿದೆ.