ದಕ್ಷಿಣ ಕನ್ನಡ: ಪದ್ಮ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿನಾಡು ಕಾಸರಗೋಡಿನ ರೈತನನ್ನು ಅರಸಿ ಬಂದಿದೆ. ಗ್ರೋ ಬ್ಯಾಗ್ ನಲ್ಲಿ ಭತ್ತದ ತಳಿಗಳನ್ನು ಪೋಷಿಸಿ ಸಂರಕ್ಷಿಸುತ್ತಿರುವ ಈ ಕೃಷಿಕನಿಗೆ ಪದ್ಮ ಪ್ರಶಸ್ತಿಯ ಅದೃಷ್ಟ ಬಾಗಿಲು ತೆರೆದಿದೆ. ಅಂದಹಾಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಇವರೇ ಕೇರಳದ ಕಾಸರಗೋಡು ಜಿಲ್ಲೆಯ ಬೊಳ್ಳೂರು ಗ್ರಾಮ ಪಂಚಯತ್ ನ ಬೆಳೆರಿ ನಿವಾಸಿ ಸತ್ಯನಾರಾಯಣ.
650 ಕ್ಕೂ ಮಿಕ್ಕಿದ ವಿವಿಧ ತಳಿಗಳನ್ನು ಬೆಳೆಸಿ, ಸಂರಕ್ಷಿಸುತ್ತಿರುವ ಸತ್ಯನಾರಾಯಣರ ಕೃಷಿ ವೈಖರಿಯನ್ನು ಗುರುತಿಸಿ ಕೇಂದ್ರ ಸರಕಾರ ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದ ಸುಮಾರು 4 ಎಕರೆ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬರುತ್ತಿರುವ ಸತ್ಯನಾರಾಯಣ ಅವರು, ತೋಟದಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಹೆಚ್ಚಾಗಿ ರಬ್ಬರ್ ಬೆಳೆಯನ್ನೇ ಬೆಳೆಸುತ್ತಾ ಬಂದಿದ್ದಾರೆ. ಜೊತೆಗೆ ಸ್ವಲ್ಪ ಅಡಿಕೆ, ತೆಂಗು ಹಾಗು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.