ರಾಮನಗರ : ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಎಂಬುವವರ ಮನೆಯಲ್ಲಿ ಇಂದು(ಮೇ.10) ಗೃಹ ಪ್ರವೇಶವನ್ನು ಹಮ್ಮಿಕೊಂಡಿದ್ದರು. ಅದರಂತೆ ಮಧ್ಯಾಹ್ನ 1.30 ರ ಸಮಯದಲ್ಲಿ ಬಂದಂತಹ ಅತಿಥಿಗಳು ಊಟ ಮಾಡಿದ್ದರು. ಬಳಿಕ ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಕೂಡಲೇ 28 ಕ್ಕೂ ಹೆಚ್ಚು ಜನರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
8 ಮಕ್ಕಳು ಇದ್ದು, ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆ ವೈದ್ಯರು ಯಾವುದೇ ಪ್ರಾಣಾಪಾಯದ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಸಿಲಿನ ಕಾರಣ ಫುಡ್ ಪಾಯಿಸನ್ ಆಗಿರುವ ಕುರಿತು ಅನುಮಾನ ಮೂಡಿದೆ. ಅಧಿಕಾರಿಗಳು ಊಟವನ್ನು ಸ್ಯಾಂಪಲ್ ತರಿಸಿಕೊಂಡಿದ್ದಾರೆ.