ನವದೆಹಲಿ : ಭಾರತ ಆಪರೇಷನ್ ಸಿಂಧೂರ್ ಮೂಲಕ ಮೇ 6-7 ರಂದು ಪಾಕಿಸ್ತಾನದಲ್ಲಿದ್ದ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದೆ.
ಭಾರತ-ಪಾಕಿಸ್ತಾನ ಗಡಿಯ ಒಟ್ಟು 26 ಸ್ಥಳಗಳಲ್ಲಿ, ಉತ್ತರದ ಬಾರಾಮುಲ್ಲಾದಿಂದ ದಕ್ಷಿಣದ ಭುಜ್‌ವರೆಗೆ, ಅಂತಾರಾಷ್ಟ್ರೀಯ ಗಡಿ ಮತ್ತು ಲೈನ್ ಆಫ್ ಕಂಟ್ರೋಲ್ (LoC) ಉದ್ದಕ್ಕೂ ಶಂಕಿತ ಡ್ರೋನ್‌ಗಳು ಕಾಣಿಸಿಕೊಂಡಿವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ಶುರುವಾಗಿದೆ. ಅಲ್ಲದೇ ಪಾಕಿಸ್ತಾನ ಭಾರತವನ್ನು ಟಾರ್ಗೆಟ್ ಮಾಡಿ ಡ್ರೋಣ್, ಕ್ಷಿಪಣಿ ಮೂಲಕ ದಾಳಿಗೆ ಯತ್ನಿಸಿದೆ. ಶುಕ್ರವಾರ ಪಾಕಿಸ್ತಾನ ಪಂಜಾಬ್ ಫಿರೋಜ್‌ಪುರ, ಪಠಾಣ್ ಕೋಟ್, ರಾಜಸ್ಥಾನದ ಜೈಸಲ್ಮೇರ್, ಜಮ್ಮುಕಾಶ್ಮೀರದ ಪೂಂಚ್, ಸಾಂಬಾ, ರಜೌರಿ ಮೇಲೆ ಡ್ರೋಣ್ ದಾಳಿ ನಡೆಸಲು ಯತ್ನಿಸಿದೆ. ಆದ್ರೆ ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರವನ್ನೂ ನೀಡಿದೆ.