ನವದೆಹಲಿ: ವಾರಣಾಸಿಯ (Varanasi) ಕಾಶಿ ವಿಶ್ವನಾಥ ದೇಗುಲಕ್ಕೆ (Kashi Vishwanath Temple) ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರು ಅರ್ಚಕರಂತೆ ವಸ್ತ್ರ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಯುಪಿ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪೊಲೀಸರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರವನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಧರಿಸಲು ಅನುಮತಿಸುವ ನಿರ್ಧಾರವು ದೊಡ್ಡ ಭದ್ರತಾ ಅಪಾಯವನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಯಾವ ಪೊಲೀಸ್ ನಿಯಮಗಳ ಪ್ರಕಾರ ಪೊಲೀಸರು ಅರ್ಚಕರ ವೇಷ ಧರಿಸುವುದು ಸರಿ? ಇಂತಹ ಆದೇಶ ನೀಡುವವರನ್ನು ಅಮಾನತು ಮಾಡಬೇಕು. ನಾಳೆ ಯಾವುದಾದರೂ ವಂಚಕ ಇದರ ಲಾಭ ಪಡೆದು ಅಮಾಯಕ ಸಾರ್ವಜನಿಕರನ್ನು ಲೂಟಿ ಮಾಡಿದರೆ ಏನಾಗುತ್ತದೆ? ಯುಪಿ ಸರ್ಕಾರ ಮತ್ತು ಆಡಳಿತವು ಉತ್ತರಿಸಬೇಕಿದೆ ಎಂದು ಅಖಿಲೇಶ್ ಯಾದವ್ ಎಕ್ಸ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.